ಚಿತ್ರ: ಪ್ರೇಮರಾಗ ಹಾಡು ಗೆಳತಿ
ಸಾಹಿತ್ಯ: ಕೆ. ಕಲ್ಯಾಣ್
ಸಂಗೀತ: ಇಳಯರಾಜ
ಗಾಯನ: ಎಸ್.ಪಿ. ಬಾಲಸುಭ್ರಮಣ್ಯಂ, ಚಂದ್ರಿಕ, ಗಂಗಾಧರ್

ಆರತಿ ಎತ್ತಿರೆ ಆನಂದ ನೀ ಮದನ ಗೋಪಾಲ ..
ಯಮುನೆಯೊಳಗೆ ಧಿಮ್ಮಿಕ್ಕು ತಕ್ಕಥೈ ಕುಣಿದ ಗೋಪಾಲ ..
ರಾಧೆಯ ಕೊರಳ ಕೊಳಲ ದನಿಗೆ ಕೊಳಲ ಮರೆತನವ್ವ ..
ಸ್ತ್ರಿ ಲೋಲ!
ಆರತಿ ಎತ್ತಿರೆ ಪನ್ನೀರ ಚೆಲ್ಲಿರೆ ..
ನಲಿದ ಗೋಪಾಲ .. ನಲಿದ ಗೋಪಾಲ ..

ಲಲನಾಮಣಿ ಓ ಲಲನಾಮಣಿ
ಈ ಲಲ್ಲನೆ ನಲ್ಲನಾದ ಗೋಪಾಲ
ದವನಾಮಣಿ ಮಾಧವನಾಮಣಿ
ಈ ಅಂಗನೆ ಮಲ್ಲನಾದ ಗೋಪಾಲ

ಎಲ್ಲೆ ಹಾಡಿದರು .. ಆಹ ಒಲ್ಲೆ ಎನದವಳ
ಈ ರಾಧೆ ಮನಸೊಳಗೆ .. ಈ ಶ್ಯಾಮನೆ ಸಖನ!

ಲಲನಾಮಣಿ ಓ ಲಲನಾಮಣಿ
ಈ ಲಲ್ಲನೆ ನಲ್ಲನಾದ ಗೋಪಾಲ
ಓ ದವನಾಮಣಿ ಮಾಧವನಾಮಣಿ
ಈ ಅಂಗನೆ ಮಲ್ಲನಾದ ಗೋಪಾಲ!

ಯಾವ ಮೊಹ ಯಾವ ಮೊಹ ಮುರಳಿ ಕರೆ
ಈ ರಾಧೆ ಎದೆಯಾಳವನ್ನ ಮೂಹಿಸಿಹುದು
ಯಾವ ಲೀಲೆ ರಾಸ ಲೀಲೆ ಮಂದಹಾಸವು
ಈ ನೀಲ ಮೇಘನನ್ನು ಸಹ ಸೋಲಿಸಿಹುದು
ಪ್ರೇಮದ ಸಾಗರ .. ಕೃಷ್ಣನ ಎದೆಯಲೆ
ಪ್ರೇಮವ ಕಲಿಸಿದ .. ರಾಗವು ಎದುರಲೆ
ರಾಧೆ ಜೊತೆ ಶ್ಯಾಮನ ಜೊತೆ ..
ಪ್ರೀತಿ ಗೆಳೆತನ ಹೊಸತನ ಹೊಡೆತನ ತಂತು ತನ ನ ನಾ!

ಲಲನಾಮಣಿ ಓ ಲಲನಾಮಣಿ
ಈ ಲಲ್ಲನೆ ನಲ್ಲನಾದ ಗೋಪಾಲ
ಓ ದವನಾಮಣಿ ಮಾಧವನಾಮಣಿ
ಈ ಅಂಗನೆ ಮಲ್ಲನಾದ ಗೋಪಾಲ!

ಯಾವ ವಿಧ ಯಾವ ಪದ ಮೋದವಿದೊ
ಪ್ರೀತಿ ಚಿನ್ಮಯವೊ ತನ್ಮಯವೊ ಆಗುತಿಹುದು
ಯಾವ ಜನ್ಮ ಯಾವ ಧರ್ಮ ಸಂಪದವಿದೊ
ಯಾವ ಬಂಧನವು ಇಬ್ಬರನು ಬಂಧಿಸಿಹುದೊ
ತಿರುಗುವ ಭೂಮಿಯ .. ತಿರುಗುವ ಪ್ರೀತಿಯು
ಹೃದವ ಹೃದಯಕೆ .. ತಿರುಗಿಸಿ ಬಿಡುವುದು
ನೆನ್ನೆಗು ಹಿಂದ ನಾಳೆಗು ಮುಂದೆ
ಎಂದು ನಿಲುವುದು ಗೆಲುವುದು ವುಳಿವುದು ಪ್ರೀತಿ ದೇವರು!

ಲಲನಾಮಣಿ ಓ ಲಲನಾಮಣಿ
ಈ ಲಲ್ಲನೆ ನಲ್ಲನಾದ ಗೋಪಾಲ
ಓ ದವನಾಮಣಿ ಮಾಧವನಾಮಣಿ
ಈ ಅಂಗನೆ ಮಲ್ಲನಾದ ಗೋಪಾಲ!

ಎಲ್ಲೆ ಹಾಡಿದರು .. ಆಹ ಒಲ್ಲೆ ಎನದವಳ
ಈ ರಾಧೆ ಮನಸೊಳಗೆ .. ಈ ಶ್ಯಾಮನೆ ಸಖನ!

ಲಲನಾಮಣಿ ಓ ಲಲನಾಮಣಿ
ಈ ಲಲ್ಲನೆ ನಲ್ಲನಾದ ಗೋಪಾಲ
ಓ ದವನಾಮಣಿ ಮಾಧವನಾಮಣಿ
ಈ ಅಂಗನೆ ಮಲ್ಲನಾದ ಗೋಪಾಲ! |೨|

Category: ಕನ್ನಡ ಚಿತ್ರಸಾಹಿತ್ಯ
Category: ಪ್ರೇಮರಾಗ ಹಾಡು ಗೆಳತಿ ಚಿತ್ರ
Category: ಕೆ. ಕಲ್ಯಾಣ್ ಸಾಹಿತ್ಯ
ವರ್ಗ: ಎಸ್.ಪಿ. ಬಾಲಸುಭ್ರಮಣ್ಯಂ ಗಾಯನ
ವರ್ಗ: ಚಂದ್ರಿಕ ಗಾಯನ
ವರ್ಗ: ಗಂಗಾಧರ್ ಗಾಯನ